ಪಶ್ಚಿಮ ಬಂಗಾಳ, ಸೆ 18 (DaijiworldNews/HR): ಪಶ್ಚಿಮ ಬಂಗಾಳದ ಟಿಟಾಘರ್ ಫ್ರೀ ಇಂಡಿಯಾ ಹೈಸ್ಕೂಲ್ನಲ್ಲಿ ಶನಿವಾರ ತರಗತಿಗಳು ನಡೆಯುತ್ತಿರುವಾಗ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಮೊಹಮ್ಮದ್ ಅರಿಯನ್, ಶೇಖ್ ಬಬ್ಲು, ಸಾದಿಕ್ ಮತ್ತು ರೆಹಾನ್ ಎಂದು ಗುರುತಿಸಲಾಗಿದೆ.
ಆರೋಪಿಗಳಲ್ಲಿ ಒಬ್ಬ ಶಾಲೆಯ ಮಾಜಿ ವಿದ್ಯಾರ್ಥಿ ಎಂದು ಪೊಲೀಸರು ತಿಳಿಸಿದ್ದು, ಈ ಬಗ್ಗೆ ಫೋರೆನ್ಸಿಕ್ ತನಿಖೆಗೆ ಆದೇಶಿಸಲಾಗಿದೆ.
ಇನ್ನು ಬಂಧಿತ ಆರೋಪಿಗಳು ಶಾಲೆಯ ಆವರಣದ ಮೇಲೆ ಏಕೆ ದಾಳಿ ಮಾಡಿದ್ದಾರೆ ಎಂದು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ.