ಹುಬ್ಬಳ್ಳಿ, ಸೆ 18 (DaijiworldNews/HR): ಜನ ಬಿಜೆಪಿ, ಮೋದಿ ಪರ ಇದ್ದಾರೆ ಹಾಗಾಗಿ ಕಾಂಗ್ರೆಸ್ ಏನೇ ತಿಪ್ಪರಲಾಗ ಹಾಕಿದರೂಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಭಾರತ ಜೊಡೋ, ರಥಯಾತ್ರೆ ಸೇರಿದಂತೆ ಯಾವುದೇ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರಲ್ಲ ಎಂದರು.
ಇನ್ನು ಕಾಂಗ್ರೆಸ್ ಏನೇ ತಿಪ್ಪರಲಾಗ ಹಾಕಿದರೂಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲ್ಲ ಯಾಕೆಂದರೆ ಕಾಂಗ್ರೆಸ್ ಮಾಡುತ್ತಿರುವ ನಾಟಕವನ್ನು ಜನರು ನೋಡುತ್ತಿದ್ದಾರೆ. ಜನರು ಎಂದಿಗೂ ಬಿಜೆಪಿ, ಮೋದಿ ಪರ ಇದ್ದಾರೆ ಎಂದು ಹೇಳಿದ್ದಾರೆ.