ಒಡಿಶಾ, ಸೆ 18 (DaijiworldNews/HR): ಒಡಿಶಾ ರಾಜ್ಯದಲ್ಲಿ ಇಂದು ಆಯೋಜಿಸಿದ್ದ ವಿಶೇಷ ಕಾರ್ಯಾಚರಣೆಯಲ್ಲಿ 700 ಕ್ಕೂ ಹೆಚ್ಚು ನಕ್ಸಲರು ಮತ್ತು ನಕ್ಸಲ್ ಬೆಂಬಲಿಗರು ಶರಣಾಗಿರುವುದಾಗಿ ಆಂಧ್ರಹಾಲ್ ಬಿಎಸ್ಎಫ್ ಕ್ಯಾಂಪ್ ಮತ್ತು ಮಲ್ಕಾನ್ಗಿರಿ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಶರಣಾದವರಲ್ಲಿ 300 ಮಂದಿ ರಂಗಬೆಲ್ ಜಿಲ್ಲೆಯ ಭಜಗುಡ, ಬೈಸಿಗುಡ, ಖಲ್ಜಗುಡ, ಪತ್ರಾಪುಟ್, ಒಂಡೆಪದರ್, ಸಂಬಲ್ಪುರ, ಸಿಂಧಿಪುಟ್, ಪಡಲ್ಪುಟ್, ಕುಸುಂಪುಟ್, ಮಠಂಪುಟ್ ಮತ್ತು ಜೋಡಿಗುಮ್ಮ ಗ್ರಾಮಗಳಿಗೆ ಸೇರಿದವರಾಗಿದ್ದಾರೆ.
ಇನ್ನು ಆಂಧ್ರ ಮತ್ತು ಒಡಿಶಾ ಗಡಿ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆಗಳು ಮುಂದುವರಿದಿದ್ದು, ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿ ಮತ್ತು ಕೊಲೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.