ಮುಂಬೈ, ಸೆ 17 (DaijiworldNews/HR): ಮಹಾರಾಷ್ಟ್ರದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಶಾಲೆಯ ಲಿಫ್ಟ್ನ ಬಾಗಿಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮಲಾಡ್ ವೆಸ್ಟ್ನಲ್ಲಿರುವ ಸೇಂಟ್ ಮೇರಿ ಇಂಗ್ಲಿಷ್ ಶಾಲೆಯ ಶಿಕ್ಷಕಿ ಜಿನೆಲ್ ಫೆರ್ನಾಂಡಿಸ್ ಮೃತ ಶಿಕ್ಷಕಿ.
ಶಾಲೆಯ 6ನೇ ಮಹಡಿಯಲ್ಲಿ ತರಗತಿ ಮುಗಿಸಿ ಲಿಫ್ಟ್ ಮೂಲಕ ಸ್ಟಾಪ್ ರೂಂಗೆ ಹೋಗುವವರಿದ್ದು, 6ನೇ ಫ್ಲೋರ್ ನಲ್ಲಿ ಲಿಫ್ಟ್ ಹತ್ತಿದ್ದಾರೆ. ಆದರೆ ಕಾಲೊಂದು ಒಳಗೆ ಇಟ್ಟ ತಕ್ಷಣ ಬಾಗಿಲು ಮುಚ್ಚಿಕೊಂಡಿದ್ದು, ದೇಹವೆಲ್ಲ ಹೊರಗಡೆಯೇ ಇತ್ತು. ಅದಾದ ಬಳಿಕ ಲಿಫ್ಟ್ 7ನೇ ಮಹಡಿಗೆ ಹೋಗಿದ್ದು ಲಿಫ್ಟ್ ಹಾಗೂ ಗೊಡೆಯ ಮಧ್ಯೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು ಜಿನೆಲ್ ಅವರು ಕಿರುಚಿದ್ದನ್ನು ಕೇಳಿ ಅಲ್ಲಿದ್ದ ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಸಹಾಯಕ್ಕೆ ಧಾವಿಸಿ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.