ಮುಂಬೈ, ಸೆ 17 (DaijiworldNews/DB): ಸ್ಥಳೀಯ ಭಾಷೆ ಮಾತನಾಡುವ ಸಿಬಂದಿಯನ್ನೇ ಬ್ಯಾಂಕ್ಗಳಲ್ಲಿ ನೇಮಕ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದಾರೆ.
ಮುಂಬೈನಲ್ಲಿ ನಡೆದ ಭಾರತೀಯ ಬ್ಯಾಂಕ್ ಒಕ್ಕೂಟದ 75ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸ್ಥಳೀಯ ಭಾಷೆ ಮಾತನಾಡುವ ಸಿಬಂದಿ ಬ್ಯಾಂಕ್ನಲ್ಲಿದ್ದರೆ ಗ್ರಾಹಕರಿಗೆ ಬ್ಯಾಂಕ್ ವ್ಯವಹಾರಕ್ಕೆ ಅನುಕೂಲವಾಗುತ್ತದೆ. ಹೀಗಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯ ಭಾಷೆ ಮಾತನಾಡುವವರನ್ನೇ ಆಯ್ಕೆ ಮಾಡಿಕೊಳ್ಳಬೇಕು. ಪ್ರಕ್ರಿಯೆ ವೇಳೆ ಅದನ್ನು ಉಲ್ಲೇಖಿಸಬೇಕು ಎಂದು ಒತ್ತಾಯಿಸಿದರು.
ವೈವಿಧ್ಯಗಳ ದೇಶವಾಗಿರುವ ಭಾರತದಲ್ಲಿ ಸ್ಥಳೀಯ ಭಾಷೆ ಅಗತ್ಯವಾಗಿ ತಿಳಿದಿರಬೇಕು. ಆದರೆ ಕೆಲವು ಬ್ಯಾಂಕ್ಗಳಲ್ಲಿ ಸಿಬಂದಿಯೇ ಭಾರತೀಯನಾದ ಮೇಲೆ ಹಿಂದಿ ಗೊತ್ತಿರಬೇಕು ಎಂದು ಹೇಳುತ್ತಾರೆ ಎಂದು ಕೇಳಲ್ಪಟ್ಟಿದ್ದೇನೆ. ಈ ರೀತಿ ಮಾತನಾಡುವುದರಿಂದ ಬ್ಯಾಂಕ್ನಲ್ಲಿ ಉತ್ತಮ ವ್ಯವಹಾರ ನಡೆಸುವುದು ಅಸಾಧ್ಯ ಎಂದವರು ಪ್ರತಿಪಾದಿಸಿದರು.
ವ್ಯವಹಾರಗಳೆಲ್ಲಾ ಆನ್ಲೈನ್ನಲ್ಲೇ ನಡೆಯುವುದರಿಂದ ಬ್ಯಾಂಕ್ ಸಿಬಂದಿಗಳ ನಡುವೆಯೇ ಗೋಡೆ ನಿರ್ಮಾಣವಾಗಿದೆ. ಆದರೆ ಗ್ರಾಹಕರ ಹಿತದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಲ್ಲ. ಸಿಬಂದಿ ನಡುವೆ ಧನಾತ್ಮಕ ಮತ್ತು ವ್ಯಾವಹಾರಿಕ ಸಂಬಂಧ ಇರಬೇಕು ಎಂದರು.