ಪಶ್ಚಿಮ ಬಂಗಾಳ, ಸೆ 17 (DaijiworldNews/HR): ಪಶ್ಚಿಮ ಬಂಗಾಳದ ಉತ್ತರ 24 ಪರಗಣಗಳಲ್ಲಿ ಶಾಲಾ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿದ್ದ ವೇಳೆ ಕಚ್ಚಾ ಬಾಂಬ್ ಸ್ಫೋಟ ಇಂದು ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ.
ಸಾಂದರ್ಭಿಕ ಚಿತ್ರ
ತರಗತಿಗಳು ನಡೆಯುತ್ತಿದ್ದ ಸಮಯದಲ್ಲಿ 11 ಗಂಟೆ ಸುಮಾರಿಗೆ ರೂಫ್ಟಾಪ್ನಿಂದ ಸ್ಫೋಟದ ಶಬ್ದ ಕೇಳಸಿದ್ದು, ತಕ್ಷಣ ಸ್ಥಳಕ್ಕೆ ಶಿಕ್ಷಕರು ತೆರಳಿ ನೋಡಿದಾಗ ಶಾಲಾ ಕಟ್ಟಡದ ಮೇಲ್ಛಾವಣಿಯ ಅರ್ಧ ಭಾಗ ಹಾನಿಗೀಡಾಗಿರುವುದು ತಿಳಿದು ಬಂದಿದೆ.
ಇನ್ನು ಅಪರಿಚಿತ ವ್ಯಕ್ತಿಗಳು ಶಾಲೆಯ ಕಟ್ಟಡದ ಮೇಲೆ ಕಚ್ಚಾ ಬಾಂಬ್ ಎಸೆದಿದ್ದಾರೆ ಎನ್ನಲಾಗುತ್ತಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.