ತೆಲಂಗಾಣ, ಸೆ 17 (DaijiworldNews/DB): ಸಿಕಂದರಾಬಾದ್ನ ಪರೇಡ್ ಮೈದಾನದ ಬಳಿ '40% ಕಮಿಷನ್ ಸಿಎಂಗೆ ಸುಸ್ವಾಗತ' ಎಂದು ಬ್ಯಾನರ್ ಹಾಕಲಾಗಿದೆ. ಆದರೆ ಈ ಬ್ಯಾನರ್ ಯಾರು ಹಾಕಿದ್ದಾರೆ ಎಂಬುದು ತಿಳಿದು ಬಂದಿಲ್ಲ.
ಕಲಬುರಗಿಯಲ್ಲಿ ಇಂದು ನಡೆದ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವಕ್ಕೂ ಮುನ್ನ ಹೈದರಾಬಾದ್ ಕರ್ನಾಟಕ ವಿಮೋಚನೆ ರೂವಾರಿ ಸರ್ದಾರ್ ವಲ್ಲಭಬಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಸಮಾರಂಭದಲ್ಲಿ ಭಾಗವಹಿಸಲು ಸಿಎಂ ಬೊಮ್ಮಾಯಿ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಸಿಕಂದರಾಬಾದ್ನ ಪೆರೇಡ್ ಮೈದಾನದ ಬಳಿ ಸಿಎಂ ಬೊಮ್ಮಾಯಿ ಅವರನ್ನು ಗುರಿಯಾಗಿಸಿ ಈ ಬ್ಯಾನರ್ ಹಾಕಲಾಗಿದೆ ಎನ್ನಲಾಗಿದೆ. ಬ್ಯಾನರ್ ಅಳವಡಿಕೆಯಾಗಿರುವುದನ್ನು ಟ್ವಿಟರ್ ಬಳಕೆದಾರರೊಬ್ಬರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಬ್ಯಾನರ್ನ್ನು ಅಳವಡಿಸಿರುವುದು ಯಾರು ಎಂಬುದು ತಿಳಿದು ಬಂದಿಲ್ಲ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಲಂಗಾಣಕ್ಕೆ ಭೇಟಿ ನೀಡಿದ್ದು, ಪರೇಡ್ ಮೈದಾನದಲ್ಲಿ ಇಂದು ನಡೆದ ಹೈದರಾಬಾದ್ ಲಿಬರೇಶನ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದೇ ಸಮಯದಲ್ಲಿ ಈ ಬ್ಯಾನರ್ ಅಳವಡಿಕೆಯಾಗಿದೆ ಎಂದು ತಿಳಿದು ಬಂದಿದೆ.