ಮಧ್ಯಪ್ರದೇಶ, ಸೆ 17 (DaijiworldNews/MS) : ಭಾರತದ ಕಾಡುಗಳಿಂದ ಕಣ್ಮರೆಯಾಗಿದ್ದ ಚೀತಾಗಳನ್ನು ಮತ್ತೆ ಬೆಳೆಸುವ ಪ್ರಯತ್ನವಾಗಿ ಇಂದು ಬೆಳಗ್ಗೆ ನಮೀಬಿಯಾದಿಂದ ತರಲಾಗಿದ್ದ ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ
70 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಈ ಚಿರತೆಗಳನ್ನು ಇಂದು ಬೆಳಗ್ಗೆ 10.45ಕ್ಕೆ ಕುನೋ ಉದ್ಯಾನವನಕ್ಕೆ ಮೋದಿ ಬಿಡುಗಡೆ ಮಾಡಿದ್ದಾರೆ. ಇದು ವನ್ಯಜೀವಿಗಳನ್ನು ಸಂರಕ್ಷಿಸುವ ಪ್ರಯತ್ನಕ್ಕೆ ಇಂದು ಹೊಸ ಶಕ್ತಿ ನೀಡಲಿವೆ.
ಈ ಚೀತಾಗಳನ್ನು ಆಪ್ರಿಕಾ ಕಂಡದ ನಮೀಬಿಯಾದಿಂದ ತರಲಾಗಿದ್ದು, 5 ಹೆಣ್ಣು ಹಾಗೂ 3 ಗಂಡು ಚೀತಾಗಳು ಉದ್ಯಾನವನ ಸೇರಿವೆ. ಕುನೋ ಉದ್ಯಾನವನಕ್ಕೆ ಚೀತಾಗಳನ್ನು ಬಿಟ್ಟ ಬಳಿಕ ಪ್ರಧಾನಿ ಮೋದಿ ಚೀತಾಗಳ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು.