ನವದೆಹಲಿ, ಸೆ 16 (DaijiworldNews/HR): ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಕೊಲೆ ಪ್ರಕರಣವನ್ನು ಗೋವಾ ಪೊಲೀಸರಿಂದ ವಶಪಡಿಸಿಕೊಳ್ಳಲು ಕೇಂದ್ರ ತನಿಖಾ ದಳ (ಸಿಬಿಐ) ತಂಡವು ಗೋವಾಕ್ಕೆ ಶುಕ್ರವಾರ ಆಗಮಿಸಿದೆ.
ಮಾಹಿತಿ ಸಂಗ್ರಹಿಸಲು ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ವೈದ್ಯಕೀಯ ವೃತ್ತಿಪರರೊಂದಿಗೆ ಮಾತನಾಡಲು ಸಿಬಿಐ ತಂಡದ ಅಧಿಕಾರಿಗಳು ಗೋವಾಕ್ಕೆ ತೆರಳಿದ್ದಾರೆ.
ಇನ್ನು ಸೋನಾಲಿ ಫೋಗಟ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇಡೀ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗುವುದು ಎಂದು ಉತ್ತರ ಗೋವಾ ಎಸ್ಪಿ ಶೋಭಿತ್ ಸಕ್ಸೇನಾ ತಿಳಿಸಿದ್ದಾರೆ.