ನವದೆಹಲಿ, ಸೆ 16 (DaijiworldNews/DB): ದೆಹಲಿಯಲ್ಲಿ ನೈಜಿರಿಯಾ ಮೂಲದ 30 ವರ್ಷದ ಮಹಿಳೆಗೆ ಮಂಕಿಪಾಕ್ಸ್ ರೋಗಾಣು ದೃಢಪಟ್ಟಿದೆ.
ಮಹಿಳೆಯಲ್ಲಿ ರೋಗಾಣು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆಯನ್ನು ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬ ವ್ಯಕ್ತಿಯಲ್ಲಿ ರೋಗದ ಶಂಕಿತ ಲಕ್ಷಣಗಳು ಕಂಡು ಬಂದಿದ್ದು, ಆತನನ್ನು ದೆಹಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ದೆಹಲಿಯಲ್ಲಿ ಈವರೆಗೆ 8 ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು13 ಮಂದಿಯಲ್ಲಿ ಮಂಕಿಪಾಕ್ಸ್ ದೃಢಪಟ್ಟಿದೆ.