ಮಹಾರಾಷ್ಟ್ರ, ಸೆ 16 (DaijiworldNews/DB): ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ದಕ್ಷಿಣದಲ್ಲಿರುವ ಅರೇಬಿಯನ್ ಸಮುದ್ರದಲ್ಲಿ ಮುಳುಗುತ್ತಿದ್ದ ದೋಣಿಯಿಂದ 18 ಮಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಶುಕ್ರವಾರ ರಕ್ಷಿಸಿದೆ.
ದೋಣಿಯಲ್ಲಿ 17 ಮಂದಿ ಭಾರತೀಯರು ಮತ್ತು ಓರ್ವ ಇಥಿಯೋಪಿಯನ್ ಪ್ರಜೆ ಇದ್ದರು. ದೋಣಿ ಮುಳುಗುತ್ತಿರುವುದು ಗೊತ್ತಾದ ಕೂಡಲೇ ದೋಣಿಯಲ್ಲಿದ್ದವರು ಭಾರತೀಯ ಕೋಸ್ಟ್ ಗಾರ್ಡ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತತ್ಕ್ಷಣ ಕಾರ್ಯಪ್ರವೃತ್ತರಾದ ಕೋಸ್ಟ್ಗಾರ್ಡ್ ಸಿಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಕೋಸ್ಟ್ ಗಾರ್ಡ್ನ ಎರಡು ಹಡಗುಗಳು ಮತ್ತು ಒಂದು ಹೆಲಿಕಾಪ್ಟರ್ ಬಳಸಿಕೊಂಡು ಎಲ್ಲಾ 18 ಮಂದಿ ಪ್ರಯಾಣಿಕರನ್ನು ಸುರಕ್ಷಿತವಾಗಿ ದಡ ಸೇರಿಸಲಾಯಿತು ಎಂದು ವರದಿಯಾಗಿದೆ.