ನವದೆಹಲಿ, ಸೆ 16 (DaijiworldNews/HR): 2023ರ ವೇಳೆಗೆ ಭಾರತದಲ್ಲಿ ಹೈಡ್ರೋಜನ್ ಚಾಲಿತ ರೈಲುಗಳನ್ನು ಸಿದ್ಧಗೊಳ್ಳಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ವಂದೇಭಾರತ್ ಎಕ್ಸ್ಪ್ರೆಸ್ ಸೆಮಿ ಹೈ ಸ್ಪೀಡ್ ಮತ್ತು ಅತಿ ವೇಗದ ರೈಲುಗಳಲ್ಲಿ ಒಂದನ್ನು ಭಾರತದಲ್ಲಿ ಆಂತರಿಕ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದಿದ್ದಾರೆ.
ವಂದೇ ಭಾರತ್ಗೆ ಇತ್ತೀಚೆಗೆ ರೈಲ್ವೇ ಸುರಕ್ಷತಾ ಆಯುಕ್ತರಿಂದ ಹಸಿರು ನಿಶಾನೆ ಸಿಕ್ಕಿದ್ದು, ನಮ್ಮ ಗಮನ ಕೇವಲ ರೈಲುಗಳನ್ನು ತಯಾರಿಸುವುದು ಮಾತ್ರವಲ್ಲ, ಅರೆ-ಹೈ ಅಥವಾ ಹೈಸ್ಪೀಡ್ ರೈಲುಗಳನ್ನು ಓಡಿಸಲು ನಾವು ಟ್ರ್ಯಾಕ್ ನಿರ್ವಹಣಾ ವ್ಯವಸ್ಥೆಯಲ್ಲಿ ಶ್ರಮಿಸುತ್ತಿದ್ದೇವೆ ಎಂದರು.
ಹೊಸ ವಂದೇ ಭಾರತ್ ರೈಲುಗಳಲ್ಲಿ ಒರಗುವ ಆಸನಗಳು, ಸ್ವಯಂಚಾಲಿತ ಅಗ್ನಿ ಸಂವೇದಕಗಳು, ಸಿಸಿಟಿವಿ ಕ್ಯಾಮೆರಾಗಳು, ವೈಫೈ ಸೌಲಭ್ಯ, ಮೂರು ಗಂಟೆಗಳ ಬ್ಯಾಟರಿ ಬ್ಯಾಕಪ್ ಮತ್ತು ಜಿಪಿಎಸ್ ವ್ಯವಸ್ಥೆಗಳು ಸೇರಿದಂತೆ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.