ಹೈದರಾಬಾದ್, ಸೆ 15 (DaijiworldNews/HR): ನೂತನವಾಗಿ ನಿರ್ಮಾಣವಾಗುತ್ತಿರುವ ತೆಲಂಗಾಣ ರಾಜ್ಯ ಸಚಿವಾಲಯಕ್ಕೆ ಭಾರತದ ಸಂವಿಧಾನದ ಸ್ಥಾಪಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಇಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ತೆಲಂಗಾಣ ರಾಜ್ಯ ಸಚಿವಾಲಯಕ್ಕೆ ಭಾರತದ ಸಂವಿಧಾನದ ಸ್ಥಾಪಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಇಡುವ ನಿರ್ಧಾರವನ್ನ ಜಾರಿಗೆ ತರಲು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ ಎಂದರು.
ಇನ್ನು ಹೊಸ ಸಂಸತ್ತಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಇಡಬೇಕೆಂಬ ತೆಲಂಗಾಣ ಸರ್ಕಾರದ ಬೇಡಿಕೆಯನ್ನ ಪರಿಗಣಿಸಲು ಸಿಎಂ ಕೆಸಿಆರ್ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲಿದ್ದಾರೆ ಎಂದು ತಿಳಿದು ಬಂದಿದೆ.