ನವದೆಹಲಿ, ಸೆ 15 (DaijiworldNews/HR): ಬಿಜೆಪಿಯು ನಮ್ಮ ಪಕ್ಷದ ಶಾಸಕರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷವು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ ನಂತರ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಡಿಜಿಪಿ ಗೌರವ್ ಯಾದವ್ ಅವರನ್ನು ದೆಹಲಿ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಮತ್ತು 11 ಪಕ್ಷದ ಶಾಸಕರು ಬುಧವಾರ ಚಂಡೀಗಢದಲ್ಲಿ ಭೇಟಿ ಮಾಡಿದ್ದು, ಪಕ್ಷದ 10 ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದು, ಪಂಜಾಬ್ ಸರಕಾರವನ್ನು ಉರುಳಿಸಲು ತಲಾ 25 ಕೋಟಿ ರೂ. ಆಫರ್ ನೀಡಿದ್ದಾರೆಂದು ಆರೋಪಿಸಿದ್ದಾರೆ.
ಇನ್ನು ರಾಜ್ಯದ ಕೆಲವು ಶಾಸಕರು ಸಲ್ಲಿಸಿದ ದೂರಿನ ನಂತರ ಪಂಜಾಬ್ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.