ಪುಣೆ, ಸೆ 15 (DaijiworldNews/DB): ಆನ್ ಲೈನ್ ನಲ್ಲಿ ಸಾಲ ಪಡೆಯಲು ಅರ್ಜಿ ಸಲ್ಲಿಕೆಗೆ ಹಣ ನೀಡದ್ದಕ್ಕೆ ಮೊಮ್ಮಗಳು ಅಜ್ಜಿಯನ್ನು ಕೊಲೆ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ.
ವಾರ್ಜೆ ನಾಕಾ ಬಳಿಯ ನಿವಾಸಿ ಸುಲೋಚನಾ ಡಾಂಗೆ (70) ಕೊಲೆಯಾದವರು. ಗೌರಿ ಡಾಂಗೆ (24) ಕೊಲೆಗೈದ ಮೊಮ್ಮಗಳು.
ಆನ್ ಲೈನ್ ಮೂಲಕ ಸಾಲ ಪಡೆಯಲು ಅರ್ಜಿ ಸಲ್ಲಿಕೆಗಾಗಿ 15 ಸಾವಿರ ರೂ.ಗಳನ್ನು ಪಾವತಿಸುವುದಕ್ಕೆ ಅಜ್ಜಿಯಲ್ಲಿ ಗೌರಿ ಹಣ ಕೇಳಿದ್ದಳು. ಆದರೆ ಹಣ ನೀಡಲು ಅಜ್ಜಿ ನಿರಾಕರಿಸಿದ್ದರಿಂದ ಸಿಟ್ಟುಗೊಂಡ ಆಕೆ ಅಜ್ಜಿಯನ್ನು ಕೊಲೆ ಮಾಡಿದ್ದಾಳೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಕೊಲೆ ಕೇಸ್ ದಾಖಲಿಸಿದ್ದಾಳೆ. ವಿಚಾರಣೆ ವೇಳೆ ಆಕೆ ಹೇಳಿಕೆ ಬದಲಾಯಿಸುತ್ತಲೇ ಇದ್ದುದರಿಂದ ಪೊಲೀಸರಿಗೆ ಆಕೆಯ ಮೇಲೆಯೇ ಅನುಮಾನ ಬಂದಿದೆ.
ಬಳಿಕ ಆಕೆಯನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಡಿಸಿಪಿ (ವಲಯ 3) ಪೌರ್ನಿಮಾ ಗಾಯಕ್ವಾಡ್ ತಿಳಿಸಿರುವುದಾಗಿ ವರದಿಯಾಗಿದೆ.