ನವದೆಹಲಿ, ಸೆ 15 (DaijiworldNews/MS): ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದಿರುವ ಕೇಂದ್ರದ ಮಾಜಿ ಸಚಿವ , ಮಾಜಿ ರಾಜ್ಯಸಭಾ ಸಂಸದ ಗುಲಾಂ ನಬಿ ಆಜಾದ್ ತಮ್ಮ ಹೊಸ ರಾಜಕೀಯ ಪಕ್ಷ ಘೋಷಿಸುವುದಾಗಿ ತಿಳಿಸಿದ ಬೆನ್ನಲ್ಲೇ ಇದೀಗ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕ ಹೊಂದಿರುವ ರೆಸಿಸ್ಟೆನ್ಸ್ ಫ್ರಂಟ್ ಭಯೋತ್ಪಾದಕ ಸಂಘಟನೆಯು ಗುಲಾಂ ನಬಿ ಆಜಾದ್ಗೆ ಬೆದರಿಕೆ ಹಾಕಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಪೋಸ್ಟರ್ಗಳನ್ನೂ ಹಾಕಲಾಗಿದ್ದು, "ದೇಶದ್ರೋಹಿಗಳ ಹೃದಯದಲ್ಲಿ ನಿಷ್ಠೆ ಇಲ್ಲ, ನಂಬಲರ್ಹವಾಗಿ ಕಾಣಿಸಿಕೊಳ್ಳುವಂತಹ ಸುಳ್ಳು ನಾಟಕವಾಡುತ್ತಿದ್ದಾರೆ" ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದ್ದು, ಆಜಾದ್ ಅವರನ್ನು 'ರಾಜಕೀಯ ಗೋಸುಂಬೆ' ಎಂದು ದೂಷಿಸಲಾಗಿದೆ.
ಕಾಶ್ಮೀರದ ರಾಜಕೀಯದಲ್ಲಿ ಆಜಾದ್ ಅವರ ಆಸಕ್ತಿಯು ಪೂರ್ವ ಯೋಜಿತವಾಗಿದೆ. ಅವರು ಈ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು ಎಂದು ಪೋಸ್ಟರ್ ಹೇಳಿದೆ.