ಚೆನ್ನೈ, ಸೆ 15 (DaijiworldNews/HR): ಬಿಜೆಪಿಯು ಇಂಡಿಯಾವನ್ನು ಹಿಂಡಿಯಾವನ್ನಾಗಿ ಮಾಡುವುದನ್ನು ನಿಲ್ಲಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.
ಹಿಂದಿ ಭಾಷೆ ಭಾರತೀಯ ಭಾಷೆಗಳ ಪ್ರತಿಸ್ಪರ್ಧಿ ಭಾಷೆಯಲ್ಲ, ಬದಲಿಗೆ ಅದು ಮಿತ್ರ ಭಾಷೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಟಾಲಿನ್, ಸಂವಿಧಾನದ 8ನೇ ಶೆಡ್ಯೂಲ್ನಲ್ಲಿರುವ ಎಲ್ಲ 22 ಭಾಷೆಗಳನ್ನು ಸರ್ಕಾರದ ಅಧಿಕೃತ ಭಾಷೆಗಳೆಂದು ಘೋಷಿಸಬೇಕು. ಹಿಂದಿ ಭಾರತದ ರಾಷ್ಟ್ರೀಯ ಭಾಷೆ ಅಥವಾ ಅಧಿಕೃತ ಭಾಷೆಯಲ್ಲ. ಹಿಂದಿ ದಿವಸ್ ಬದಲಿಗೆ ನಾವು ಭಾರತೀಯ ಭಾಷೆಗಳ ದಿನವನ್ನು ಆಚರಿಸಬೇಕು ಎಂದರು.
ಇನ್ನು ಹಿಂದಿ ಮತ್ತು ಇತರ ಭಾಷೆಗಳಗಳ ಅಭಿವೃದ್ಧಿಗಾಗಿ ಮಾಡಲಾಗುತ್ತಿರುವ ವೆಚ್ಚದಲ್ಲಿ ಸಾಕಷ್ಟು ವ್ಯತ್ಯಾಸವಿದ್ದು, ಈ ವ್ಯತ್ಯಾಸವನ್ನು ತಪ್ಪಿಸಬೇಕು ಎಂದಿದ್ದಾರೆ.
ಹಿಂದಿ ಮತ್ತು ಗುಜರಾತಿ, ಹಿಂದಿ ಮತ್ತು ತಮಿಳು, ಹಿಂದಿ ಮತ್ತು ಮರಾಠಿ ಪ್ರತಿಸ್ಪರ್ಧಿ ಭಾಷೆಗಳೆಂದು ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದು, ಹಿಂದಿ ಯಾವತ್ತೂ ದೇಶದಲ್ಲಿ ಇತರ ಭಾಷೆಗಳಿಗೆ ಪ್ರತಿಸ್ಪರ್ಧಿಯಾಗಲಾರದು ಎಂದು ಅಮಿತ್ ಶಾ ಹೇಳಿದ್ದರು.