ಅಯೋಧ್ಯೆ, ಸೆ 15 (DaijiworldNews/HR): ಇನ್ಸ್ಪೆಕ್ಟರ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಅಯೋಧ್ಯೆ ಪೊಲೀಸ್ ಠಾಣೆಯ ಮುಂಭಾಗದ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಇತ್ತೀಚೆಗಷ್ಟೆ ಇನ್ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದಿದ್ದ ಓಂಕಾರ್ ನಾಥ್ (46) ಅವರದ್ದು ಆತ್ಮಹತ್ಯೆಯೂ ಅಥವಾ ಕೊಲೆಯೂ ಎಂಬ ಚರ್ಚೆ ಶುರುವಾಗಿದೆ.
ಅಪಾರ್ಟ್ಮೆಂಟ್ನ ಮೆಟ್ಟಿಲುಗಳ ಪಕ್ಕದಲ್ಲಿರುವ ಕಬ್ಬಿಣದ ರೇಲಿಂಗ್ಗೆ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಸಂತ ಕಬೀರ್ ನಗರ ಜಿಲ್ಲಾಯವರಾದ ಓಂಕಾರ್ ನಾಥ್ ಮೂಲದವರಾಗಿದ್ದು ಇಂದು ಬೆಳಿಗ್ಗೆ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ಅವರನ್ನು ಮಾತನಾಡಿಸಲು ಹೋಗಿ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಮೇಲೆ ಹೋಗಿ ನೋಡಿದಾಗ ಬೆಚ್ಚಿಬಿದ್ದಿದ್ದಾರೆ.
ಇನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.