ಭುವನೇಶ್ವರ್, ಸೆ 15 (DaijiworldNews/DB): ಮಂಗಳಮುಖಿಯನ್ನು ಪ್ರೀತಿಸಿದ ವಿವಾಹಿತನೊಬ್ಬನಿಗೆ ಆತನ ಪತ್ನಿಯೇ ಮಂಗಳಮುಖಿಯೊಂದಿಗೆ ಮದುವೆ ಮಾಡಿಸಿದ ಘಟನೆ ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ನಡೆದಿದೆ.
ಫಕೀರ್ ನಿಯಾಲ್ ಎಂಬಾತ ಕಲಹಂಡಿಯ ದೇಪುರ್ ಗ್ರಾಮದ ತೃತೀಯಲಿಂಗಿಯಾಗಿರುವ ಸಂಗೀತಾರನ್ನು ಸಾಂಪ್ರದಾಯಿಕ ರೀತಿಯಲ್ಲಿ ವರಿಸಿದ್ದಾನೆ. ಐದು ವರ್ಷದ ಹಿಂದೆ ಮಹಿಳೆಯನ್ನು ಫಕೀರ್ ಮದುವೆಯಾಗಿದ್ದು, ದಂಪತಿಗೆ ಎರಡು ವರ್ಷದ ಮಗುವಿದೆ. ಬಳಿಕ ಕಳೆದೊಂದು ವರ್ಷದಿಂದ ಮಂಗಳಮುಖಿಯಾಗಿರುವ ಸಂಗೀತಾಳನ್ನು ಫಕೀರ್ ಪ್ರೀತಿಸುತ್ತಿದ್ದ. ಅಲ್ಲದೇ ಆಕೆಯೊಂದಿಗೆ ದೈಹಿಕ ಸಂಬಂಧವನ್ನೂ ಬೆಳೆಸಿಕೊಂಡಿದ್ದ. ಈ ವಿಚಾರ ಫಕೀರ್ ಪತ್ನಿಗೆ ಗೊತ್ತಾಗಿದೆ. ಆದರೆ, ಪತ್ನಿ ಇದನ್ನು ವಿರೋಧಿಸದೆ ಅವರಿಬ್ಬರ ಮದುವೆಗೆ ಒಪ್ಪಿಗೆ ನೀಡಿದ್ದಾಳೆ.
ಮಂಗಳಮುಖಿಯರ ಸಮುದಾಯದ ಪದ್ದತಿ ಪ್ರಕಾರವೇ ಫಕೀರ್ ಮತ್ತು ಸಂಗೀತಾ ಮದುವೆ ನಡೆದಿದೆ. ಮದುವೆಗೆ ಫಕೀರನ ಪತ್ನಿಯೇ ಎಲ್ಲಾ ವ್ಯವಸ್ಥೆ ಮಾಡಿದ್ದು, ಆಕೆಯ ಉಪಸ್ಥಿತಿಯಲ್ಲಿಯೇ ಮದುವೆ ನಡೆದಿದೆ.