ಕೋಲ್ಕತ್ತ, ಸೆ 15 (DaijiworldNews/HR): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ಮತ್ತು ಪೊಲೀಸರ ದಬ್ಬಾಳಿಕೆ ಮಿತಿ ಮೀರಿದೆ ಎಂದು ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪಶ್ಚಿಮ ಬಂಗಾಳ ರಾಜ್ಯವು ಹೊತ್ತಿ ಉರಿಯುತ್ತಲೇ ಇದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮಮತಾ ಬ್ಯಾನರ್ಜಿ ಅವರು ಪ್ರಜಾಪ್ರಭುತ್ವ ಕಾಪಾಡಲು ಮಮತಾ ವಿಫಲರಾಗಿದ್ದಾರೆ ಎಂದರು.
ಇನ್ನು ಮಮತಾ ಬ್ಯಾನರ್ಜಿ ಸರ್ಕಾರದ ಕ್ರೂರತೆಯಿಂದಾಗಿ ಜನ ಕಂಗಾಲಾಗಿದ್ದು, ರಾಜ್ಯದ ಪ್ರಜಾಪ್ರಭುತ್ವ ಕಾಪಾಡಲು ಮಮತಾ ವಿಫಲರಾಗಿದ್ದಾರೆ ಎಂದು ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.