ಬೆಂಗಳೂರು, ಸೆ 14 (DaijiworldNews/SM): ಗಂಗಾ ಕಲ್ಯಾಣ ಯೋಜನೆಯ ಗುತ್ತಿಗೆಯಲ್ಲಿ ನಡೆದಿದೆರುವ ಅವ್ಯವಹಾರ ಕುರಿತು ತನಿಖೆಗೆ ಆದೇಶಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅಧಿವೇಶನದಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ನ ಯಂತೀಂದ್ರ ಸಿದ್ದರಾಮಯ್ಯ ಅವರು ಗಂಗಾ ಕಲ್ಯಾಣ ಯೋಜನೆ ಕುರಿತು ಪ್ರಸ್ತಾಪಿಸಿ ತನಿಖೆ ಬಗ್ಗೆ ಪ್ರಶ್ನಿಸಿದರು. ಇದೇ ವಿಷಯದ ಮೇಲೆ ಕೆಲ ಹೊತ್ತು ದೀರ್ಘ ಚರ್ಚೆ ನಡೆಯಿತು. ಕಾಂಗ್ರೆಸ್ ಕೆಲವು ಸದಸ್ಯರು ಗಂಗಾ ಕಲ್ಯಾಣ ಯೋಜನೆ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸುವಂತೆ ಆಗ್ರಹಿಸಿ ಧರಣಿ ನಡೆಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಗಂಗಾ ಕಲ್ಯಾಣ ಯೋಜನೆಯ ಗುತ್ತಿಗೆ ಅವ್ಯವಹಾರ ಸೇರಿದಂತೆ, ಗುತ್ತಿಗೆದಾರರಿಂದ ಸಲ್ಲಿಕೆಯಾದ ನಕಲಿ ಪ್ರಮಾಣ ಪತ್ರ, ಬೋರವೆಲ್ ಕೊರೆಯಲು ಸೂಚಿಸಿದ ದರದಲ್ಲಿನ ತಾರತಮ್ಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ವಿಧಾನಸಭೆಗೆ ಅವರು ತಿಳಿಸಿದರು.
ಅದಲ್ಲದೇ ಗಂಗಾಕಲ್ಯಾಣ ಯೋಜನೆಯನ್ನು ಹೇಗೆ ಮತ್ತು ಯಾವ ರೀತಿಯಲ್ಲಿ ಹೊಸದಾಗಿ ಅನುಷ್ಠಾನಗೊಳಿಸಬೇಕು, ಈ ಹಿಂದೆ ಬಾಕಿ ಇರುವ ಬೋರ್ವೆಲ್ಗಳನ್ನು ಸಂಪೂರ್ಣಗೊಳಿಸಲು ಏನು ಮಾಡಬೇಕು ಎಂಬ ಬಗ್ಗೆ ಶಾಸಕರ ಸಭೆ ಕರೆದು ನಿರ್ಧರಿಸಲಾಗುವುದು. ಆದರೆ ನೀವು ಧರಣಿ ಬಿಟ್ಟು ಏನು ಹೇಳಬೇಕೆಂದಿದ್ದಿರೋ ಅದನ್ನು ಸಭೆಯಲ್ಲಿ ಹೇಳಿ ಎಂದರು. ಬಳಿಕವೇ ಕಾಂಗ್ರೆಸ್ ಸದಸ್ಯರು ದರಣಿ ಹಿಂಪಡೆದರು.
ಅವಧಿಯಲ್ಲಿ ಗಂಗಾಕಲ್ಯಾಣ ಯೋಜನೆಯ ಅನುಷ್ಠಾನದಲ್ಲಿ ಆದ ಲೋಪವಾಗಿದೆ. 2018ರ ಫಲಾನುಭವಿಗಳಿಗೆ ಬೋರ್ವೆಲ್ ಕೊರೆಸಿಲ್ಲ. ಇಡೀ ರಾಜ್ಯಕ್ಕೆ ಒಬ್ಬ ಗುತ್ತಿಗೆದಾರನಿಗೆ ಬೋರ್ವೆಲ್ ಕೊರೆಯಲು ಗುತ್ತಿಗೆ ನೀಡಲಾಗಿದೆ. ಹೀಗಾಗಿಯೇ ಯೋಜನೆ ವಿಳಂಬವಾಗುತ್ತಿದ್ದು, ಇದು ಸರಿಯಲ್ಲ. ಈ ಹಿಂದೆ ಇದ್ದಂತೆ ಪ್ರತಿ ಜಿಲ್ಲೆಗಳಿಗೂ ಗುತ್ತಿಗೆದಾರರನ್ನು ನೇಮಕಗೊಳಿಸಿ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದರು.