ಮುಂಬೈ, ಸೆ 14 (DaijiworldNews/DB): ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರ ಫೇಸ್ಬುಕ್ ಪುಟದಲ್ಲಿ ಅಸಭ್ಯ ಮತ್ತು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪದಡಿ ಮಹಿಳೆಯೊಬ್ಬರನ್ನು ಸೈಬರ್ ಪೊಲೀರು ಮಂಗಳವಾರ ಬಂಧಿಸಿದ್ದಾರೆ.
ಸ್ಮೃತಿ ಪಾಂಚಾಲ್ ( 50) ಬಂಧಿತ ಮಹಿಳೆ. ಈಕೆ ವಿವಿಧ ನಕಲಿ ಖಾತೆಗಳನ್ನು ಬಳಸಿಕೊಂಡು ಅಮೃತಾ ಫಡ್ನವಿಸ್ ಅವರ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ನಿಂದನೀಯ ಪೋಸ್ಟ್ಗಳನ್ನು ಮಾಡುತ್ತಿದ್ದಳು. 53 ನಕಲಿ ಫೇಸ್ಬುಕ್ ಐಡಿಗಳು ಹಾಗೂ 13 ಜಿಮೇಲ್ ಖಾತೆಗಳನ್ನು ಆಕೆ ಹೊಂದಿದ್ದಳು. ಕಳೆದ ಎರಡು ವರ್ಷಗಳಿಂದ ಈ ರೀತಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಆರೋಪಿ ಮಹಿಳೆಯನ್ನು ಗುರುವಾರದವರೆಗೆ ನ್ಯಾಯಾಲಯವರು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಆಕೆ ಅವಹೇಳನಕಾರಿ ಪೋಸ್ಟ್ ಮಾಡಲು ಕಾರಣವೇನೆಂದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.