ಬಳ್ಳಾರಿ, ಸೆ 14 (DaijiworldNews/MS) : ಬೆಳ್ಳಂಬೆಳಗ್ಗೆ ಕಪ್ಪಗಲ್ಲು ಗ್ರಾಮದ ಹೊರವಲಯದಲ್ಲಿ ಕಾಲುವೆಗೆ ಆಟೋರಿಕ್ಷಾ ಉರುಳಿ ಬಿದ್ದು, ಹಲವು ಮಂದಿ ನೀರುಪಾಲಾಗಿದ್ದಾರೆ. ಮೂವರ ಶವ ಹೊರಕ್ಕೆ ತೆಗೆಯಲಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ದುರ್ಗಮ್ಮ( 40), ನಿಂಗಮ್ಮ(38) ಮೃತ ದುರ್ದೈವಿಗಳಾಗಿದ್ದು, ಘಟನೆ ಸಂದರ್ಭದಲ್ಲಿ ಆಟೋ ಡ್ರೈವರ್ ಭೀಮಾ ಸೇರಿದಂತೆ 8 ಜನ ಮಹಿಳಾ ಕೂಲಿ ಕಾರ್ಮಿಕರು ಪ್ರಯಾಣ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.