ರಾಮನಗರ, ಸೆ 13 (DaijiworldNews/HR): ಚನ್ನಪಟ್ಟಣದ ಕೋಟೆ ಬಡವಾಣೆಯಲ್ಲಿ ಪ್ರೇಮಿಯೊಬ್ಬ ಪ್ರೀತಿ ಮಾಡಲು ನಿರಾಕರಿಸಿದ ಯುವತಿಗೆ ಚಾಕುವಿನಿಂದ ಇರಿದು, ತಾನು ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಇವರಿಬ್ಬರು ಜೊತೆಗೆ ಕೆಲಸ ಮಾಡುತ್ತಿದ್ದು, ರಾಮನಗರದ ನಿವಾಸಿ ವೆಂಕಟೇಶ್ ಎಂಬಾತ ಮೇಘನಾ ಎಂಬ ಯುವತಿಗೆ ಚಾಕುವಿನಿಂದ ಇರಿದು ತಾನು ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇನ್ನು ಹಲ್ಲೆಗೊಳಗಾದ ಯುವತಿ ಮೇಘನಾ ಪ್ರಾಣಾಪಾಯದಿಂದ ಪಾರಾಗಿದ್ದು, ಆತ್ಮಹತ್ಯೆಗೆ ಯತ್ನಿಸಿ ಚಿಂತಾ ಜನಕವಾಗಿದ್ದ ವೆಂಕಟೇಶನನ್ನು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಚನ್ನಪಟ್ಟಣ ಸಿಟಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.