ಬೆಂಗಳೂರು, ಸೆ 13 (DaijiworldNews/MS): ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ ಪಕ್ಷ , ಬಿಜೆಪಿಯ ಹಿನ್ನಡೆಗೆ ಇನ್ನಿಲ್ಲದ ಕಾರ್ಯತಂತ್ರ ಹೂಡಿದ್ದು ಇದಕ್ಕೆ ಇಂದು ಕಾಂಗ್ರೆಸ್ ಬಿಡುಗಡೆ ಮಾಡಿರುವ ಗಮನಸೆಳೆಯುವ ಈ ಹಾಡೇ ಸಾಕ್ಷಿ .
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ , " ರಾಜ್ಯ ಆಳ್ತಿರೋದು - 40% ಸರ್ಕಾರ , ರಾಜ್ಯದ ಜನರ ಕಷ್ಟಕ್ಕೆ ಕಾರಣ- ಭ್ರಷ್ಟಾಚಾರ. ಭ್ರಷ್ಟ ಬಿಜೆಪಿ ಸರ್ಕಾರದ ಅಕ್ರಮಗಳು, ಹಗರಣಗಳು ಎಳೆದಷ್ಟೂ ಹೊರಬರುತ್ತವೆ. ಬಿಜೆಪಿ ಅಂದ್ರೆ ಭ್ರಷ್ಟಾಚಾರದ ಅಕ್ಷಯಪಾತ್ರೆ!" ಎಂದು ವಿಡಿಯೋ ಸಾಂಗ್ ನ್ನು ಪೋಸ್ಟ್ ಮಾಡಿದೆ,
'ಕಮಿಷನ್, ಕಾಸು ಬಿಜೆಪಿಯ ಮನೆ ದೇವ್ರು' ಎಂಬ ಹಾಡಿನ ಮೂಲಕ ಸರ್ಕಾರವನ್ನು ಕಾಂಗ್ರೆಸ್ ಟೀಕಿಸಿದ್ದು, ಮೊಟ್ಟೆ ಹಗರಣ , ಪಿಎಸ್ಐ ಹಗರಣ, ಬಿಟ್ ಕಾಯಿನ್, ಕೋವಿಡ್ ಫಂಡ್, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಇತ್ಯಾದಿಗಳನ್ನು ಉಲ್ಲೇಖಿಸಿ ಬಿಜೆಪಿಯ ಆಡಳಿತ ವೈಫಲ್ಯದ ಬಗ್ಗೆ ಕಾಳೆಲೆದಿದೆ.