ಗುರುಗ್ರಾಮ, ಸೆ 13 (DaijiworldNews/DB): ಗುರ್ಗಾಂವ್ನ ಲೀಲಾ ಹೊಟೇಲ್ಗೆ ಬಾಂಬ್ ಬೆದರಿಕೆ ಬಂದಿದ್ದು, ಹೊಟೇಲ್ನಲ್ಲಿದ್ದ ಗ್ರಾಹಕರನ್ನು ಸ್ಥಳಾಂತರ ಮಾಡಲಾಗಿದೆ.
ಆಂಬಿಯನ್ಸ್ ಮಾಲ್ ಕಾಂಪ್ಲೆಕ್ಸ್ ನಲ್ಲಿರುವ ಗುರ್ಗಾಂವ್ನ ಲೀಲಾ ಹೋಟೆಲ್ಗೆ ಇಂದು ಬೆಳಗ್ಗೆ 11:35 ರ ವೇಳೆಗೆ ಬಾಂಬ್ ಇರುವುದಾಗಿ ಬೆದರಿಕೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತಂಕಿತರಾದ ಹೊಟೇಲ್ ಮಾಲಿಕರು ಮತ್ತು ಸಿಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಹೊಟೇಲ್ನಲ್ಲಿದ್ದ ಎಲ್ಲಾ ಗ್ರಾಹಕರನ್ನು ಮಂಗಳವಾರ ಸ್ಥಳಾಂತರ ಮಾಡಲಾಗಿದ್ದು, ಬಾಂಬ್ ಪತ್ತೆಗಾಗಿ ಹೊಟೇಲ್ ಆವರಣದಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳು ಶೋಧ ಕಾರ್ಯದಲ್ಲಿ ಪಾಲ್ಗೊಂಡಿದೆ. ಕರೆ ಬಂದ ಸಂಖ್ಯೆ ಸದ್ಯ ಸ್ವಿಚ್ ಆಫ್ ಆಗಿದ್ದು,ಕರೆ ಮಾಡಿದವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.