ಕಾಶ್ಮೀರ, ಸೆ 13 (DaijiworldNews/HR): ಜ್ಞಾನವಾಪಿ ಪ್ರಕರಣದ ಕುರಿತು ವಾರಣಾಸಿ ಜಿಲ್ಲಾ ನ್ಯಾಯಾಲಯವು ಹಿಂದೂ ಪರವಾಗಿ ತೀರ್ಪು ನೀಡಿ, ಮುಸ್ಲಿಂ ಸಮುದಾಯದ ಅರ್ಜಿಯನ್ನು ತಿರಸ್ಕರಿಸಿದ್ದು ಈ ಕುರಿತಾಗಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ವಾಗ್ದಾಳಿ ನಡೆಸಿದ್ದಾರೆ.
ಜ್ಞಾನವಾಪಿ ಪ್ರಕರಣದ ಕುರಿತು ನ್ಯಾಯಾಲಯದ ತೀರ್ಪಿನ ಬಗ್ಗೆ ಟ್ವೀಟ್ ಮಾಡಿರುವ ಮುಫ್ತಿ, ಪೂಜಾ ಸ್ಥಳಗಳ ಕಾಯಿದೆಯ ಹೊರತಾಗಿಯೂ ಜ್ಞಾನವಾಪಿ ಕುರಿತ ನ್ಯಾಯಾಲಯದ ತೀರ್ಪು ಗದ್ದಲ ಎಬ್ಬಿಸಲು ಕಾರಣವಾಗುತ್ತದೆ ಮತ್ತು ಕೋಮು ವಾತಾವರಣವನ್ನು ಸೃಷ್ಟಿಸುತ್ತದೆ ಎಂದರು.
ಇನ್ನು ಈ ತೀರ್ಪು ಬಿಜೆಪಿಯ ಕಾರ್ಯಸೂಚಿಯಲ್ಲಿ ಗೇಮ್ ಪ್ಲಾನ್ ಆಗಿದ್ದು, ನ್ಯಾಯಾಲಯಗಳು ತಮ್ಮದೇ ಆದ ತೀರ್ಪುಗಳನ್ನು ಅನುಸರಿಸದಿರುವುದು ವಿಷಾದನೀಯ ಸ್ಥಿತಿಯಾಗಿದೆ ಎಂದಿದ್ದಾರೆ.