ಚಂಡೀಗಢ, ಸೆ 13 (DaijiworldNews/HR): ಫಗ್ವಾರಾ ಮತ್ತು ಚಂಡೀಗಢವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಲೋಡ್ ಆಗಿದ್ದ ಟ್ರೇಲರ್ ಬ್ಯಾಲೆನ್ಸ್ ಕಳೆದುಕೊಂಡು ರಸ್ತೆಯಲ್ಲಿ ಕೆಳಗೆ ಬಿದ್ದಿದ್ದು, ರಭಸವಾಗಿ ಬರುತ್ತಿದ್ದ ಕಾರುಗಳು ಟ್ರೈಲರ್ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
ಅಪಘಾತ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೃಹತ್ ವಾಹನವು ತನ್ನ ಸಮತೋಲನವನ್ನು ಕಳೆದುಕೊಂಡು ಅದರಲ್ಲಿರುವ ವಸ್ತುಗಳು ರಸ್ತೆಯ ಮೇಲೆ ಬೀಳುತ್ತವೆ. ಈ ವೇಳೆ ಅದೇ ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಎರಡು ಕಾರುಗಳು ಟ್ರೈಲರ್ಗೆ ಡಿಕ್ಕಿ ಹೊಡೆದ ಪರಿಣಾಮ ಇಂದು ಕಾರಿನಲ್ಲಿದ್ದ ದಂಪತಿ ಮತ್ತು ಅವರ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಮತ್ತೊಂದು ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದು, ಟ್ರೇಲರ್ ಚಾಲಕ ಮೇಜರ್ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.