ನವದೆಹಲಿ,ಸೆ 13 (DaijiworldNews/MS): ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಮೊಬೈಲ್ ರೀಚಾರ್ಜ್ನ ವ್ಯಾಲಿಡಿಟಿಯನ್ನು 28 ದಿನಗಳ ಬದಲಿಗೆ 30 ದಿನಗಳವರೆಗೆ ನೀಡುವಂತೆ ಸೂಚಿಸಿದೆ.
ಜಿಯೋ, ಏರ್ಟೆಲ್, ವಿಐ (ವೊಡಾಫೋನ್ ಐಡಿಯಾ), ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್), ಮತ್ತು ಎಂಟಿಎನ್ಎಲ್ (ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್) ನ ಎಲ್ಲಾ ಪ್ರಿಪೇಯ್ಡ್ ಯೋಜನೆಗಳ ಸಿಂಧುತ್ವ 30 ದಿನಗಳವರೆಗೆ ಇರಬೇಕು ಎಂದು ಹಾಗೂ ಪ್ರತಿ ತಿಂಗಳು ಒಂದೇ ರೀಚಾರ್ಜ್ ದಿನಾಂಕವನ್ನು ಹೊಂದಿರುವ ಯೋಜನೆಗಳು ಇರಬೇಕು ಎಂದು ಹೇಳಿದೆ.
ಕಂಪನಿಗಳು ತಮ್ಮ ಪ್ಲಾನ್ ಗಳಲ್ಲಿ ಇಡೀ ತಿಂಗಳ ಮಾನ್ಯತೆಯೊಂದಿಗೆ ವಿಶೇಷ ವೋಚರ್ & ಕಾಂಬೊ ವೋಚರ್ ಗಳನ್ನು ತರಬೇಕು ಎಂದು 7 ತಿಂಗಳ ಹಿಂದೆಯೇ ಪ್ರಾಧಿಕಾರ ಈ ಸೂಚನೆ ನೀಡಿತ್ತು. ಆದರೆ ಕಂಪನಿಗಳು ಅನುಷ್ಠಾನಗೊಳಿಸಿರಲಿಲ್ಲ. ಈಗ ಟ್ರಾಯ್ " 60 ದಿನ "ಗಳಲ್ಲಿ ಯೋಜನೆ ಜಾರಿಗೆ ತರಬೇಕು ಎಂದು ಸೂಚಿಸಿದೆ.
ಸುರತ್ಕಲ್ ಟೋಲ್ ಗೇಟ್ ಮುಂಭಾಗ ಸೆ. 13ರಂದು ಹಮ್ಮಿಕೊಂಡಿರುವ ಸಾಮೂಹಿಕ ಧರಣಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಶನ್, ಉಭಯ ಜಿಲ್ಲೆಗಳ ಬಸ್ ಮಾಲಕರ ಸಂಘಟನೆಗಳು, ಕಾರ್ಮಿಕರ ಸಂಘಟನೆಗಳು, ವಿವಿಧ ಪಕ್ಷಗಳು ಸೇರಿದಂತೆ ಹಲವು ಸಂಘ- ಸಂಸ್ಥೆಗಳು ಭಾಗವಹಿಸುವುದಾಗಿ ಘೋಷಿಸಿವೆ.