ಉತ್ತರ ಪ್ರದೇಶ, ಸೆ 13 (DaijiworldNews/HR): ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಚಾರ್ಜ್ ಹಾಕಿದ್ದ ಮೊಬೈಲ್ ಫೋನ್ನ ಬ್ಯಾಟರಿ ಸ್ಫೋಟಗೊಂಡು ಎಂಟು ತಿಂಗಳ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಮಗು ಮಲಗಿದ್ದ ಸ್ವಲ್ಪ ಪಕ್ಕದ ಜಾಗದಲ್ಲೇ ಚಾರ್ಜ್ ಹಾಕಲಾಗಿದ್ದು, ಕೇವಲ ಆರು ತಿಂಗಳ ಹಿಂದೆ ಖರೀದಿಸಲಾಗಿದ್ದ ಪೋನ್ ಸ್ಫೋಟಗೊಂಡಿದೆ.
ಇನ್ನು ಸ್ಫೋಟದ ಸಮಯದಲ್ಲಿ ಮಗುವಿನ ತಾಯಿ ಕುಸುಮ್ ಕಶ್ಯಪ್ ಕೋಣೆಯಲ್ಲಿ ಇರಲಿಲ್ಲ. ಭಾರೀ ದೊಡ್ಡ ಶಬ್ದ ಕೇಳಿ ಬಂದ ಕಾರಣ ತಾಯಿ ಮಗುವಿನ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.