ಬೆಂಗಳೂರು, ಸೆ 12 (DaijiworldNews/SM): ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ರಾಜ್ಯ ಸರ್ಕಾರ 2,500 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆಗೆ ಸೂಚಿಸಿದೆ. ಸಹ ಶಿಕ್ಷಕರು 2200, ದೈಹಿಕ ಶಿಕ್ಷಕರು 200 ಹುದ್ದೆಗಳು, ವಿಶೇಷ ಶಿಕ್ಷಕರ (ಸಂಗೀತ, ಕಲೆ ಇತರೆ) 100 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸೂಚನೆ ನೀಡಿದೆ.
2016 ರ ನಂತರ ನಡೆಯದ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಇದಾಗಿದ್ದು, 6 ವರ್ಷಗಳ ಬಳಿಕ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಮುಂದಾಗಿದೆ. 2500 ಪೈಕಿ 2500 ಸಹ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಸದ್ಯದಲ್ಲೇ ನೇಮಕಾತಿ ಆರಂಭಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.