ಮೈಸೂರು, ಸೆ 12 (DaijiworldNews/HR): ಸಿದ್ದರಾಮಯ್ಯ ಕಾಲದಲ್ಲಿ ನಡೆದಿದ್ದ ಹಗರಣಗಳ ದಾಖಲೆಯನ್ನು ಹೊರ ತೆಗೆದು ಸಂಪೂರ್ಣ ತನಿಖೆ ಮಾಡಿ ತಪ್ಪಿತಸ್ಥರನ್ನು ಒಳಗೆ ಕೂರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಕಾಲದ ಹಗರಣಗಳ ದಾಖಲೆಗಳನ್ನು ಬಚ್ಚಿಟ್ಟಿದ್ದು, ಅದನ್ನೆಲ್ಲಾ ಹೊರಗೆ ತೆಗೆಯುವ ಕೆಲಸ ನಾವು ಮಾಡುತ್ತಿದ್ದೇವೆ. ನಾಲ್ಕು ವರ್ಷದಿಂದ ಅದನ್ನು ತೆಗೆಯುವ ಕೆಲಸ ಮಾಡಿದ್ದೇವೆ ಎಂದರು.
ಇನ್ನು ವಿರೋಧ ಪಕ್ಷದಲ್ಲಿದ್ದಾಗಲೂ ಸಿದ್ದರಾಮಯ್ಯ ಹಗರಣದ ವಿರುದ್ದ ಧ್ವನಿ ಎತ್ತಿದ್ದೆವು. ಸಿದ್ದರಾಮಯ್ಯ ಸಮಾಜವಾದಿ ನೈತಿಕತೆ ಇದ್ದ ಸಿಎಂ ಆಗಿದ್ದರೆ ಅವರೇ ತನಿಖೆ ಮಾಡುತ್ತಿದ್ದರು. ಆದರೆ ಅವರು ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.