ಅಮೃತಸರ, ಸೆ 12 (DaijiworldNews/MS): ಪಂಜಾಬ್ನ ಅಮೃತಸರದಲ್ಲಿ ಯುವತಿಯೊಬ್ಬಳು ಮಾದಕ ದ್ರವ್ಯ ಸೇವನೆಗೆ ಒಳಗಾಗಿ ನೇರ ನಿಲ್ಲಲು , ಹೆಜ್ಜೆ ಊರಲು ಆಗದೇ ಹೆಣಗಾಡುತ್ತಿರುವ ದೃಶ್ಯವೊಂದು ವೈರಲ್ ಆಗಿದ್ದು, ಪಂಜಾಬ್ ನಲ್ಲಿ ಯುವಕರಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಸೇವನೆಯ ಸಮಸ್ಯೆಯ ಬಗ್ಗೆ ತೀವ್ರ ಕಳವಳ ಉಂಟುಮಾಡಿದೆ.
ಅಮೃತಸರ ಪೂರ್ವ ಕ್ಷೇತ್ರದ ಮಕ್ಬೂಲ್ಪುರ ಪ್ರದೇಶದಲ್ಲಿ ಈ ವಿಡಿಯೋ ಸೆರೆಹಿಡಿಯಲಾಗಿದ್ದು ಯುವತಿಯೊಬ್ಬಳು ರಸ್ತೆಯ ಮೇಲೆ ನಡೆದಾಡಲು ಆಗದೆ ಹೆಣಗಾಡುತ್ತಿರುವ ದೃಶ್ಯವಿದೆ. ಈ ಪ್ರದೇಶವು ಮಾದಕ ವ್ಯಸನ ಮತ್ತು ವ್ಯಸನಿಗಳ ಸಮಸ್ಯೆಗಳಿಗೆ ಕುಖ್ಯಾತವಾಗಿದೆ.
ಸಿಖ್ಖರ ಪವಿತ್ರ ನಗರದಲ್ಲಿರುವ ಮಕ್ಬೂಲ್ಪುರವು ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದ ಘಟನೆಗಹೆಚ್ಚಾಗಿ ವರದಿಯಾಗುತ್ತಿದೆ. ಪೊಲೀಸರು ಆರಂಭಿಸಿದ ಅನೇಕ ಡಿ-ಅಡಿಕ್ಷನ್ 'ಡ್ರೈವ್'ಗಳು ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲವಾಗಿದ್ದು ಈ .
ವೀಡಿಯೊ ವೈರಲ್ ಆದ ನಂತರ, ಮಕ್ಬೂಲ್ಪುರ ಪೊಲೀಸರು ಭಾನುವಾರ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಮೂವರಿಂದ ದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಪೊಲೀಸರು ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಅನುಮಾನಾಸ್ಪದ ಚಟುವಟಿಕೆಗಳಿಂದಾಗಿ 12 ಮಂದಿಯನ್ನು ತನಿಖೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೇ ಈ ಪ್ರದೇಶದಿಂದ ಕಳವು ಮಾಡಿರುವ ಶಂಕಿತ ಐದು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೃತಸರ ಪೂರ್ವ ಕ್ಷೇತ್ರದ ಎಎಪಿ ಶಾಸಕಿ ಜೀವನಜೋತ್ ಕೌರ್ "ಪ್ರಕರಣದ ತನಿಖೆ ನಡೆಯುತ್ತಿದೆ" ಎಂದು ಹೇಳಿದ್ದಾರೆ.