ನವದೆಹಲಿ, ಸೆ 12 (DaijiworldNews/HR): 2025ರ ವೇಳೆಗೆ ದೇಶದಿಂದ ಕ್ಷಯವನ್ನು(ಟಿಬಿ ) ರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವ ಸರ್ಕಾರವು ಇಂದಿನಿಂದ 'ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ' ಪ್ರಾರಂಭಿಸಿದೆ.
ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿ-ಕ್ಷಯ 2.0 (Ni-kshay 2.0) ಪೋರ್ಟಲ್ ಪ್ರಾರಂಭಿಸಿದ್ದಾರೆ.
ಈ ಕುಇರ್ತು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಸ್ವಸ್ಥ ಭಾರತದ ಸಂಕಲ್ಪ ತೊಟ್ಟಿದೆ ಮೋದಿ ಸರ್ಕಾರ. 2025ರ ವೇಳೆಗೆ ದೇಶವನ್ನು ಟಿಬಿ ಮುಕ್ತಗೊಳಿಸಲು ʻಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನʼವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದೆ.