ಶಿಲ್ಲಾಂಗ್, ಸೆ 12 (DaijiworldNews/HR): ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ ಜಿಲ್ಲೆಯಲ್ಲಿ ಜೈಲಿನಿಂದ ಪರಾರಿಯಾಗಿದ್ದ ನಾಲ್ವರು ಕೈದಿಗಳನ್ನು ಗ್ರಾಮಸ್ಥರ ಗುಂಪೊಂದು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಜೋವಾಯ್ ಆರು ಕೈದಿಗಳ ಗುಂಪು ಪರಾರಿಯಾಗಿ ಶಾಂಗ್ಪುಂಗ್ ಗ್ರಾಮವನ್ನು ತಲುಪಿದ್ದು, ಅದರಲ್ಲಿ ಒಬ್ಬ ಆಹಾರ ಖರೀದಿಸಲು ಅಂಗಡಿಗೆ ಹೋದಾಗ, ಸ್ಥಳೀಯನೊಬ್ಬ ಅವನನ್ನು ಗುರುತಿಸಿ ಇಡೀ ಪ್ರದೇಶವನ್ನು ಎಚ್ಚರಿಸಿದ್ದ ರಾತ್ರಿ ಅವರು ತಂಗಿದ್ದ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯ ಜನರು ಬಂದು ಕೈದಿಗಳ ಗುಂಪನ್ನು ಒಡಿಸುವ ಬರದಲ್ಲಿ ಥಳಿಸಿದ್ದಾರೆ.
ಇನ್ನು ದಾಳಿಯಲ್ಲಿ ನಾಲ್ವರು ಖೈದಿಗಳು ಸಾವನ್ನಪ್ಪಿದ್ದು, ಒಬ್ಬರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.