ದೆಹಲಿ, ಸೆ 12 (DaijiworldNews/HR): ಗುಜರಾತ್ನ ಅಹಮದಾಬಾದ್ನಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ನದೆದಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಹಮದಾಬಾದ್ಗೆ ಆಗಮಿಸಿದ ಕೂಡಲೇ ದಾಳಿ ನಡೆಸಲಾಗಿದೆ ಎಂದು ಎಎಪಿಯ ಗುಜರಾತ್ ಘಟಕದ ನಾಯಕರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅರವಿಂದ್ ಕೇಜ್ರಿವಾಲ್, ಗುಜರಾತ್ ಜನರಿಂದ ಎಎಪಿಗೆ ಸಿಗುತ್ತಿರುವ ಅಪಾರ ಬೆಂಬಲದಿಂದ ಬಿಜೆಪಿ ನಲುಗಿದ್ದು, ಗುಜರಾತ್ ಪೊಲೀಸರಿಗೆ ಪಕ್ಷದ ಕಚೇರಿಯಲ್ಲಿ ಏನೂ ಸಿಗಲಿಲ್ಲ ಎಂದು ಹೇಳಿದ್ದಾರೆ.