ಮುಂಬೈ, ಸೆ 12 (DaijiworldNews/MS): ಖ್ಯಾತ ಜ್ಯೋತಿಷಿ, ಹಾಗೂ ಗ್ಲಾಮರ್ ನಿಂದಲೇ ಫೇಮಸ್ ಆಗಿರುವ ನಿಧಿ ಚೌಧರಿ ತಮ್ಮ ಸಾಮಾಜಿಕ ತಾಲತಾಣದಲ್ಲಿ ಭವಿಷ್ಯ ಹೇಳಿದ ವಿಡಿಯೋ ಪೋಸ್ಟ್ ಮಾಡಿದ್ದು , ಈ ಬಗ್ಗೆ ಟ್ರೋಲ್ ಮಾಡಿದ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲೇ ವಿಡಂಬನೆ ಮಾಡಿ ಕಮೆಂಟ್ ಮಾಡಿದ್ದಾರೆ.
ಸ್ಟಾರ್ ಆಸ್ಟ್ರಾಲಜರ್ ಜೊತೆಗೆ ಗ್ಲಾಮರ್ನಿಂದಲೂ ಫೇಮಸ್ ಆಗಿರುವ ಇವರು ನಿಧಿ ತಮ್ಮ ಬಗ್ಗೆ ತಾವೇ ಬರೆದುಕೊಂಡ ಪ್ರಕಾರ ವೃತ್ತಿಯಿಂದ ವಕೀಲರು, ಸೋಶಿಯಲ್ ಇನ್ಫ್ಲೂಯೆನ್ಸರ್, ಫ್ಯಾಶನ್ ಸ್ಟೈಲಿಸ್ಟ್, ವಾಸ್ತು ತಜ್ಞೆ, ಜೊತೆಗೆ ಟ್ಯಾರೋಟ್ ಕಾರ್ಡ್ ರೀಡರ್ ಕೂಡ ಆಗಿದ್ದಾರೆ. ಜೊತೆಗೆ ನಾನು ಮಾದಕವಾಗಿ ಕಾಣಲು ಇಷ್ಟಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನಿಧಿ ಚೌಧರಿ ಟ್ವಿಟರ್ನಲ್ಲಿ ವಿಡಿಯೋ ಒಂದನ್ನು ಹಾಕಿದ್ದು ಶನಿಯ ಕುರಿತು ವಿವರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು.ಈ ವಿಡಿಯೋದಲ್ಲಿ ಅವರು ಬ್ಲೌಸ್ ಹಾಕದೇ, ಎದೆಯನ್ನು ಸೀರೆಯಿಂದ ಮುಚ್ಚುವಂತೆ ಕುಳಿತುಕೊಂಡು ವಿವರಣೆ ನೀ್ಡಿದ್ದಾರೆ. ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಮೊದಲು ಬ್ಲೌಸ್ ಹಾಕೊಂಡು ಭವಿಷ್ಯ ಹೇಳಮ್ಮ ಅಂತ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಈ ವಿಡಿಯೋದಲ್ಲಿ ನೀಲಿ ಸೀರೆ ಧರಿಸಿದ ನಿಧಿ ಚೌಧರಿ ಕೈಗೆ ಬೆಳ್ಳಿಯ ಆಭರಣಗಳು, ರುದ್ರಾಕ್ಷ ಇತ್ಯಾದಿಗಳನ್ನು ತೊಟ್ಟಿದ್ದಾರೆ. ಜೊತೆಗೆ ಕಪ್ಪು ಬಿಂದಿ ಹಾಗೂ ಮೇಕಪ್ ಮಾಡಿಕೊಂಡಿದ್ದಾರೆ. ಹೀಗಾಗಿ ಎಲ್ಲ ಮಾಡಿ ಬ್ಲೌಸ್ ಹಾಕುವುದನ್ನು ಮಾತ್ರ ಮರೆತಿದ್ದಾರೆ ಅಂತ ನೆಟ್ಟಿಗರು ಕಾಲೆಳೆದಿದ್ದಾರೆ.