ನವದೆಹಲಿ, ಸೆ 11 (DaijiworldNews/HR): ತೀರ್ಪು ಇಷ್ಟವಾಗದಿದ್ದಾಗ ನ್ಯಾಯಾಧೀಶರ ವಿರುದ್ಧ ಆರೋಪ ಮಾಡುವ ಪ್ರವೃತ್ತಿ ಇತ್ತೀಚಿಗೆ ಹೆಚ್ಚುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ, "ಇತ್ತೀಚಿನ ದಿನಗಳಲ್ಲಿ ಅರ್ಜಿದಾರರ ವಿರುದ್ಧ ಆದೇಶ ಜಾರಿಯಾಗಿ ಅದು ಅವರಿಗೆ ಇಷ್ಟವಾಗದಿದ್ದಾಗ ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಇಂತಹ ಆರೋಪ ಮಾಡುವ ಪ್ರವೃತ್ತಿ ಇದೆ. ನಾವು ಈ ಅಭ್ಯಾಸವನ್ನು ಒಪ್ಪುವುದಿಲ್ಲ. ಈ ರೀತಿಯ ಪ್ರವೃತ್ತಿ ಮುಂದುವರೆದರೆ, ಅದು ಅಂತಿಮವಾಗಿ ನ್ಯಾಯಾಂಗ ಅಧಿಕಾರಿಯ ಮನೋಸ್ಥೈರ್ಯ ಎಂದಿದೆ.
ಇನ್ನು ಇತ್ತೀಚೆಗಷ್ಟೇ ಅಲಾಹಾಬಾದ್ ಹೈಕೋರ್ಟ್ ಕೂಡ ಹೀಗೆ ಅಸಮಾಧಾನ ಸೂಚಿಸಿದ್ದು, ಜನಸಾಮಾನ್ಯರು ನ್ಯಾಯಾಧೀಶರನ್ನು ಧಿಕ್ಕರಿಸುವಂತಹ ಆರೋಪಗಳನ್ನು ಮಾಡಿ ಅವರ ಧೃತಿಗೆಡಿಸುತ್ತಿದ್ದಾರೆ ಎಂದಿತ್ತು.