ಮುಂಬೈ, ಸೆ 11 (DaijiworldNews/HR): ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ಅಧ್ಯಕ್ಷರಾಗಿ ಮುಂದಿನ 4 ವರ್ಷಗಳಿಗೆ ಶರದ್ ಪವಾರ್ ಅವರು ಮರು ಆಯ್ಕೆಯಾಗಿದ್ದಾರೆ.
ಶರದ್ ಪವಾರ್ ಅವರು 4 ವರ್ಷಗಳ ಕಾಲ ಪಕ್ಷದ ಮುಖ್ಯಸ್ಥರಾಗಿರುತ್ತಾರೆ ಎಂದು ದೆಹಲಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರವನ್ನು ಪ್ರಕಟಿಸಲಾಗಿದೆ.
ಇನ್ನು 2019ರ ವಿಧಾನಸಭಾ ಚುನಾವಣೆಯ ಬಳಿಕ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್, ಶಿವಸೇನೆ ಹಾಗೂ ಎನ್ಸಿಪಿಯನ್ನು ಪವಾರ್ ಅವರು ಒಟ್ಟುಗೂಡಿಸಿದ್ದಾರೆ.