ಪಂಜಾಬ್, ಸೆ 11 (DaijiworldNews/HR): ಪಂಜಾಬಿನ ಗಾಯಕ ಹಾಗೂ ಕಾಂಗ್ರೆಸ್ ಮುಖಂಡ ಸಿಧು ಮೂಸ್ ವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿದಂತೆ ನಾಪತ್ತೆಯಾಗಿದ್ದ ಆರೋಪಿಯನ್ನು ಪಂಜಾಬ್ ಪೊಲೀಸರು ಪಶ್ಚಿಮ ಬಂಗಾಳ-ನೇಪಾಳ ಗಡಿಯಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಶೂಟರ್ ದೀಪಕ್ ಮುಂಡಿ ಎಂದು ಗುರುತಿಸಲಾಗಿದೆ.
ಕಾರ್ಯಾಚರಣೆಯ ಸಂದರ್ಭದಲ್ಲಿ ಅವರ ಇಬ್ಬರು ಸಹಚರರಾದ ಕಪಿಲ್ ಪಂಡಿತ್ ಮತ್ತು ರಾಜಿಂದರ್ ಅವರನ್ನು ಸಹ ಬಂಧಿಸಲಾಗಿದೆ.
ಇನ್ನು ಪಂಜಾಬ್ ಪೊಲೀಸರು, ಕೇಂದ್ರ ಏಜೆನ್ಸಿಗಳು ಮತ್ತು ದೆಹಲಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಸಹಚರರೊಂದಿಗೆ ಪರಾರಿಯಾಗಿದ್ದ ಶೂಟರ್ ದೀಪಕ್ ಅಲಿಯಾಸ್ ಮುಂಡಿಯನ್ನು ಬಂಧಿಸಲಾಗಿದೆ.