ತಿರುವನಂತಪುರಂ, ಸೆ 11 (DaijiworldNews/HR): ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ನ ಭಾರತ್ ಜೋಡೊ ಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಯಾತ್ರೆಯು ಇಂದು ಕೇರಳಕ್ಕೆ ಪ್ರವೇಶಿಸಿದೆ.
ಕೇರಳ ಮತ್ತು ತಮಿಳುನಾಡು ಗಡಿಯ ಸಮೀಪದಲ್ಲಿರುವ ಸಣ್ಣ ಪಟ್ಟಣವಾದ ಪರಸ್ಸಾಲವನ್ನು ಕಾಂಗ್ರೆಸ್ ನಾಯಕರು ತಲುಪಿದ್ದಾರೆ.
ಇನ್ನು ಕೇರಳದಿಂದ ಯಾತ್ರೆಯು ಮುಂದಿನ 18 ದಿನಗಳ ಕಾಲ ರಾಜ್ಯದ ಮೂಲಕ ಸಂಚರಿಸಲಿದ್ದು, ಸೆಪ್ಟೆಂಬರ್ 30 ರಂದು ಕರ್ನಾಟಕ ತಲುಪಲಿದೆ.