ಉತ್ತರಾಖಂಡ, ಸೆ 10 (DaijiworldNews/HR): ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯ ಭಾರತ ಮತ್ತು ನೇಪಾಳ ಗಡಿಯಲ್ಲಿ ಹರಿಯುವ ಲಾಸ್ಕೋ ನದಿಯಲ್ಲಿ ಮೇಘಸ್ಫೋಟಗೊಂಡ ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟು, 30 ಮನೆಗಳು ನಾಶವಾಗಿರುವ ಘಟನೆ ನಡೆದಿದೆ.
ಶುಕ್ರವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಲಸ್ಕು ಮತ್ತು ಮಹಾಕಾಳಿ ನದಿಯ ಪ್ರವಾಹವು ಶನಿವಾರ ಮುಂಜಾನೆ ಮನೆಗಳು ಮತ್ತು ಎರಡು ಸೇತುವೆಗಳನ್ನು ಮುಳುಗಿಸಿತು.
ಇನ್ನು ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿ ಒಬ್ಬ ಮಹಿಳೆ ಮೃತಪಟ್ಟಿರುವುದನ್ನು ದೃಢಪಡಿಸಿದ್ದು, ಇನ್ನೂ ಅನೇಕರು ನಾಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.