ರಾಜಸ್ಥಾನ, ಸೆ 10 (DaijiworldNews/HR): ಕಾಂಗ್ರೆಸ್ ನಾಯಕ ರಾಹುಲ್ ಬಾಬಾ ವಿದೇಶಿ ಟೀ ಶರ್ಟ್ ಧರಿಸಿ ಭಾರತವನ್ನ ಸಂಪರ್ಕಿಸಲು ಹೊರಟಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಟೀ ಶರ್ಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅಮಿತ್ ಶಾ, ನಾನು ರಾಹುಲ್ ಬಾಬಾ ಮತ್ತು ಕಾಂಗ್ರೆಸ್ಸಿಗರಿಗೆ ಅವರ ಸಂಸತ್ತಿನಲ್ಲಿ ಮಾಡಿದ ಭಾಷಣವನ್ನ ನೆನಪಿಸುತ್ತೇನೆ. ಭಾರತ ಒಂದು ರಾಷ್ಟ್ರವಲ್ಲ ಎಂದು ರಾಹುಲ್ ಬಾಬಾ ಹೇಳಿದ್ದರು. ಹೇ ರಾಹುಲ್ ಬಾಬಾ, ನೀವು ಯಾವ ಪುಸ್ತಕದಲ್ಲಿ ಓದಿದ್ದೀರಿ? ಲಕ್ಷ ಲಕ್ಷ ಜನ ಪ್ರಾಣ ತ್ಯಾಗ ಮಾಡಿದ ರಾಷ್ಟ್ರವಿದು' ಎಂದರು.
ಇನ್ನು ರಾಹುಲ್ ಬಾಬಾ ಭಾರತ ಜೋಡೋ ಯಾತ್ರೆಗೆ ಹೊರಟಿದ್ದು, ಅವರು ವಿದೇಶಿ ಟೀ ಶರ್ಟ್ ಧರಿಸಿ ಭಾರತವನ್ನ ಸಂಪರ್ಕಿಸಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.