ದೊಡ್ಡಬಳ್ಳಾಪುರ, ಸೆ 10 (DaijiworldNews/HR): ಬಿಜೆಪಿಯ ಜನಸ್ಪಂದನ ಕಾರ್ಯಕ್ರಮ ಯಾವ ವ್ಯಕ್ತಿಯ ಉತ್ಸವವಲ್ಲ. ಸರ್ಕಾರದ ರಿಪೋರ್ಟ್ ಕಾರ್ಡ್ ಅನ್ನು ಜನರ ಮುಂದೆ ಇಡಬೇಕಾಗಿದೆ. ಇದಕ್ಕಾಗಿ ಬಿಎಸ್ ಯಡಿಯುರಪ್ಪ ಮತ್ತು ಬೊಮ್ಮಾಯಿ ಸರ್ಕಾರದ ಸಾಧನೆಯನ್ನು ಸಬಲೀಕರಣವನ್ನು ಜನತೆಯ ಮುಂದೆ ಇಡಲಾಗುತ್ತಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಕಾಂಗ್ರೆಸ್ನ ಡಬಲ್ ಸ್ಟೇರಿಂಗ್ ಸರ್ಕಾರ ಬೇಕೆ ಅಥವಾ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಬೇಕೆ ಎಂದು ಪ್ರಶ್ನಿಸಿರುವ ಅವರು, ಬಿಜೆಪಿ ಸರ್ಕಾರ ಮೂರು ವರ್ಷದ ಸಾಧನೆಯನ್ನು ಹೊಗಳಿದ್ದಾರೆ.
ಇನ್ನು ಇಂದೆಂದೂ ಕೂಡ ಈ ರೀತಿಯ ಸಮಾವೇಶ ನಡೆದಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಡುಕ ಉಂಟಾಗಿದೆ. ಮೊದಲು ಜನೋತ್ಸವ ಎಂದು ಹೆಸರನ್ನು ಇಡಲಾಗಿತ್ತು. ಇದೀಗ ಜನ ಸ್ಪಂದನೆ ಮಾಡಲಾಗುತ್ತಿದೆ ಎಂದಿದ್ದಾರೆ.