ಉತ್ತರ ಪ್ರದೇಶ, ಸೆ 10 (DaijiworldNews/HR): ಮೋದಿಯವರಿಗೆ ದೇಶದ ಬಗ್ಗೆ ಹೆಮ್ಮೆಯಿದೆ. ಆದರೆ ನೆಹರೂ ಅವರಿಗೆ ಇರಲಿಲ್ಲ ಎಂದು ಹೇಳುವ ಮೂಲಕ ಸಿಎಂ ಯೋಗಿ ಆದಿತ್ಯನಾಥ್ ಅವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲಿಕೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಆದಿತ್ಯನಾಥ್ , 'ತಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡದ ಒಬ್ಬ ಪ್ರಧಾನಿ ಇದ್ದರು. ಆದರೆ ಈಗ ಭಾರತವು ದೇಶದ ಪರಂಪರೆ ಬಗ್ಗೆ ಹೆಮ್ಮೆಪಡುವ ಪ್ರಧಾನಿ ಮೋದಿಯನ್ನು ಹೊಂದಿದೆ ಎಂದರು.
ಇನ್ನು ಇಡೀ ಭಾರತವನ್ನು 'ಏಕ್ ಭಾರತ್ ಶ್ರೇಷ್ಠ ಭಾರತ' ಮಾಡಲು ಸಂಕಲ್ಪ ಮಾಡಿದವರು ನರೇಂದ್ರ ಮೋದಿ ಆಗಿದ್ದಾರೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಭಯೋತ್ಪಾದನೆಯ ಮೂಲವನ್ನು ಕೊನೆಗಾಣಿಸಲು ಯಾವುದೇ ಹಿಂಜರಿಕೆ ತೋರದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ನಮ್ಮ ಪ್ರಧಾನಿ ಇಂದು ವಿಶ್ವದ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು ಎಂದು ನಮಗೆಲ್ಲರಿಗೂ ಹೆಮ್ಮೆಯಿದೆ ಎಂದರು.