ನಾಗ್ಪುರ್, ಸೆ 10 (DaijiworldNews/HR): ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಕರ್ದಾರಾ ಸೇತುವೆಯ ಮೇಲೆ ನಡೆದಿದೆ.
ಕಾರು ಡಿಕ್ಕಿ ಹೊಡೆದ ಬೈಕ್ ಸವಾರ, ಆತನ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದು, ಬೈಕ್ನಲ್ಲಿದ್ದ ಎಲ್ಲರೂ ಸೇತುವೆ ಮೇಲಿಂದ ಕಳೆಗೆ ಹಾರಿ ಬಿದ್ದಿದ್ದಾರೆ.
ಇನ್ನು ಕಾರು ನಿಯಂತ್ರಣ ತಪ್ಪಿ ಬೈಕ್ ಸೇರಿದಂತೆ ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಸ್ನೇಹಿತನ ಕಾರಿನಲ್ಲಿ ಬುಟ್ಟಿಬೋರಿಗೆ ಹೋಗುತ್ತಿದ್ದ ಕಾರಿನ ಚಾಲಕ ಗಣೇಶ್ ಅಧವ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.