ನವದೆಹಲಿ, ಸೆ 10 (DaijiworldNews/DB): ಇನ್ನು ಮುಂದೆ ದೂರ ಶಿಕ್ಷಣ ಅಥವಾ ಆನ್ಲೈನ್ ಶಿಕ್ಷಣದ ಮೂಲಕ ಮಾನ್ಯತೆ ಪಡೆದ ಸಂಸ್ಥೆಗಳಿಂದ ಪದವಿ ಪಡೆದರೆ ಅದನ್ನು ಸಾಂಪ್ರದಾಯಿಕ ವಿಧಾನದಲ್ಲಿ ನೀಡುವ ಪದವಿಗೆ ಸಮಾನವೆಂದು ಯುಜಿಸಿ ಪರಿಗಣಿಸಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ, ಉನ್ನತ ಶಿಕ್ಷಣ ಸಂಸ್ಥೆಗಳು ಪದವಿ, ಸ್ನಾತಕೋತ್ತರ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೊಮಾವನ್ನು ಮುಕ್ತ ಮತ್ತು ದೂರ ಶಿಕ್ಷಣ ಅಥವಾ ಆನ್ಲೈನ್ ಶಿಕ್ಷಣದ ಮುಖಾಂತರ ನೀಡುವ ಶಿಕ್ಷಣವನ್ನು ಸಾಂಪ್ರದಾಯಿಕ ಮಾದರಿಯ ಶಿಕ್ಷಣಕ್ಕೆ ಸಮಾನವಾಗಿ ಪರಿಗಣನೆ ಮಾಡಲಾಗುವುದು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಮಟ್ಟಕ್ಕೆ ಹೆಚ್ಚಿನ ಸಹಕಾರಿಯಾಗಲಿದೆ ಎಂದಿದ್ದಾರೆ.
ಯುಜಿಸಿಯ ನಿಬಂಧನೆ 22ರ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು.