ರಾಯ್ಪುರ, ಸೆ 10 (DaijiworldNews/HR): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕುಟುಂಬವು ದೇಶಕ್ಕಾಗಿ ತ್ಯಾಗಮಾಡಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ.
ಜೆ.ಪಿ. ನಡ್ಡಾ ಅವರ ವಂಶ ರಾಜಕಾರಣದ ಕುರಿತಾದ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಕೇಸರಿ ಪಕ್ಷದಲ್ಲೇ ಸಾಕಷ್ಚು ಕುಟುಂಬ ರಾಜಕಾರಣದ ಉದಾಹರಣೆಗಳು ಇವೆ ಆದರೆ ಸೋನಿಯಾ ಗಾಂಧಿ ಅವರ ಕುಟುಂಬವು ದೇಶಕ್ಕಾಗಿ ತ್ಯಾಗಮಾಡಿದೆ ಎಂದರು.
ಇನ್ನು ಪರಿವಾರವಾದದ ಬಗ್ಗೆ ನಡ್ಡಾ ಅವರು ಹೇಳುತ್ತಿರುವುದು ಖಂಡಿತ ಸತ್ಯ. ಬಿಜೆಪಿ ನಾಯಕ ಬಲಿರಾಮ ಕಶ್ಯಪ್ ಅವರ ಮಕ್ಕಳಾದ ದಿನೇಶ್ ಕಶ್ಯಪ್ ಮತ್ತು ಕೇದಾರ್ ಕಶ್ಯಪ್, ರಮಣ್ ಸಿಂಗ್ ಮತ್ತು ಅವರ ಮಗ, ಮಾಜಿ ಸಂಸದ ಅಭಿಷೇಕ್ ಸಿಂಗ್ - ಇವೆಲ್ಲ ರಾಜ್ಯದಲ್ಲಿರುವ ಕುಟುಂಬ ರಾಜಕಾರಣದ ಕೆಲವು ಉದಾಹರಣೆಗಳು ಎಂದು ತಿರುಗೇಟು ನೀಡಿದ್ದಾರೆ.