ಬೆಂಗಳೂರು, ಸೆ 10 (DaijiworldNews/SM): ಮುಂದಿನ ದಿನಗಳಲ್ಲಿ ಕೋಮುವಾದಿ ಶಕ್ತಿಗಳನ್ನು ದಮನ ಮಾಡುವುದೇ ಮುಖ್ಯವಾಗಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ದಿನನಿತ್ಯ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರು, ರೈತರು ಆತಂಕದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿ, ಕೋಮುವಾದಿ ಶಕ್ತಿಗಳನ್ನು ದಮನ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕೇಂದ್ರ ಸರಕಾರದ ರೈತ ವಿರೋಧಿ ನೀತಿಗಳಿಂದಲೇ ಕಾಲೇಜು ವ್ಯಾಸಂಗವೂ ಪೂರ್ಣಗೊಳಿಸದ ಉದ್ಯಮಿ ಗೌತಮ್ ಅದಾನಿ ಜಗತ್ತಿನ ಮೂರನೇ ಶ್ರೀಮಂತ ಆಗಿದ್ದಾನೆ. ಜಮೀನು ಖರೀದಿ ಸಂಬಂಧ ಅನೇಕ ತಿದ್ದುಪಡಿ ಮಾಡಿ, ಕೃಷಿಯೇತರ ಚಟುವಟಿಕೆಗಳಿಗೆ ನೀಡಲಾಗುತ್ತಿದೆ. ಉಳ್ಳವನೇ ಭೂಮಿಯ ಒಡೆಯ ಎನ್ನುವ ಯೋಜನೆಯನ್ನೆ ತಂದಿದ್ದಾರೆ ಎಂದು ಸರಕಾರವನ್ನು ಟೀಕಿಸಿದರು.