ರಾಯಚೂರು, ಸೆ 09 (DaijiworldNews/DB): ಮಗುವೊಂದು ಶಾಲಾ ಸಮವಸ್ತ್ರದಲ್ಲಿ ಮಲ ವಿಸರ್ಜನೆ ಮಾಡಿಕೊಂಡಿದ್ದಕ್ಕೆ ಶಿಕ್ಷಕನೋರ್ವ ಮಗುವಿನ ಮೇಲೆ ಬಿಸಿನೀರು ಎರಚಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಂತೆಕೆಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶಿಕ್ಷಕ ಹುಲಿಗೆಪ್ಪ ಎಂಬಾತನೇ ವಿದ್ಯಾರ್ಥಿ ಮೇಲೆ ಬಿಸಿನೀರು ಎರಚಿದಾತ.
ಎರಡನೇ ತರಗತಿ ವಿದ್ಯಾರ್ಥಿ ಅಖಿತ್ ಶಾಲಾ ಸಮವಸ್ತ್ರದಲ್ಲೇ ಮಲ ವಿಸರ್ಜನೆ ಮಾಡಿಕೊಂಡಿದ್ದ. ಇದರಿಂದ ಕ್ರೋಧಗೊಂಡ ಶಿಕ್ಷಕ ಆತನ ಮೇಲೆ ಬಿಸಿನೀರು ಎರಚಿದ್ದಾನೆ. ಘಟನೆಯಲ್ಲಿ ಮಗುವಿನ ಶೇ. 40ರಷ್ಟು ದೇಹ ಸುಟ್ಟು ಹೋಗಿದೆ. ಈ ಕುರಿತು ಕೂಡಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ.